ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಸಿಗಲಿದೆ ಸಬ್ಸಿಡಿ! ನಿಮ್ಮ ಜಿಲ್ಲೆ ಇದೆಯಾ? ಹೀಗೆ ಚೆಕ್ ಮಾಡಿ.

ರಾಜ ಸರ್ಕಾರವು ಕೃಷಿ ಭಾಗ್ಯ ಯೋಜನೆ ಅಡಿ ಕೆಲವೊಂದು ಸಬ್ಸೈಡಿಯನ್ನು ನಿಮಗೆ ನೀಡಲಾಗುತ್ತಿದೆ. ಮಳೆಯಿಲ್ಲದೆ ಬರಗಾಲದಲ್ಲಿ ಕತ್ತರಿಸಿರುವಂತಹ ರೈತರಿಗೆ ಈ ಒಂದು ಯೋಜನೆಯು ತುಂಬಾ ಉಪಕಾರಿಯಾಗಿದೆ.ಬನ್ನಿ ಇನ್ನೇಕೆ ತಡ ಈ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಈ ಲೆಕ್ಕದಲ್ಲಿ ನಾವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಇದಕ್ಕಾಗಿ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ.

Farmers will get subsidy under Krishi Bhagya Yojana
Farmers will get subsidy under Krishi Bhagya Yojana

ರಾಜ್ಯದಲ್ಲಿ ರೈತರಿಗೆ ಸಿಗಲಿದೆ ಕೃಷಿ ಭಾಗ್ಯ ಯೋಜನೆಯ ಪ್ರಯೋಜನ:

ಈ ಯೋಜನೆಗಾಗಿ ಸುಮಾರು 24 ಜಿಲ್ಲೆಯ 106 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಒಂದು ಪ್ಯಾಕೇಜ್ ಮಾದರಿಯ ಸೌಲಭ್ಯವನ್ನು ರೈತರಿಗೆ ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಅಂತರ್ಜಲ ಅಭಿವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೂಡ ಕೃಷಿ ಮಾಡುವುದು ಹೇಗೆ ಎಂದು ಅದರ ಬಗ್ಗೆ ಮಾಹಿತಿ ನೀಡಲಾಗುವುದು.

ಕೃಷಿಭಾಗ್ಯ ಯೋಜನೆಯಡಿಯಲ್ಲಿ ಯಾವ ಕೆಲಸಕ್ಕೆ ಸಬ್ಸಿಡಿ ಸಿಗಲಿದೆ?

ಕೃಷಿ ಹೊಂಡ ನಿರ್ಮಾಣ
* ಕ್ಷೇತ್ರ ಬದು ನಿರ್ಮಾಣ
ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ
ಪಂಪ್ಸೆಟ್ ಖರೀದಿಸಲು ಸಬ್ಸಿಡಿ
ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಳ್ಳಲು ಸಹಾಯ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • ರೈತರ ಜಮೀನಿನ ಪಹಣಿ ಪತ್ರ
  • ಅರ್ಜಿ
  • ಎಫ್ ಐ ಡಿ ಅಂದ್ರೆ ಫ್ರೂಟ್ಸ್ ಐಡಿ (FRUITS ID) ಹೊಂದಿರಬೇಕು.
  • ಒಂದು ವೇಳೆ ರೈತರ ಬಳಿ ಫ್ರೂಟ್ಸ್ ಐಡಿ ಇಲ್ಲದೆ ಇದ್ದರೆ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ ಮೊದಲಾದವುಗಳನ್ನು ನೀಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೃಷಿ ಬಗ್ಗೆ ಆ ಯೋಜನೆಯ ಅಡಿಯಲ್ಲಿ ಸಬ್ಸಿಡಿಯನ್ನು ಒಂದೊಂದೇ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದ್ದು ಈಗ 24 ಜಿಲ್ಲೆಗಳಲ್ಲಿ ಮಾತ್ರ ಕಾಣಬಹುದು. ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ. ಅವರಿಂದ ಮಾಹಿತಿ ಪಡೆದುಕೊಂಡು ಸಬ್ಸಿಡಿ ಹಣಕ್ಕಾಗಿ ಅಪ್ಲೈ ಮಾಡಬಹುದು.

Leave a Reply

Your email address will not be published. Required fields are marked *