ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ!ರೈತರ ಮುಖದಲ್ಲಿ ಮಂದಹಾಸ! ನಿನ್ನೆ ಅಲ್ಲಲ್ಲಿ ಭಾರೀ ಮಳೆ.

ನಮಸ್ಕಾರ ಸ್ನೇಹಿತರೇ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಮಳೆಯ ಮಾಹಿತಿ ನೀಡಲಾಗುವುದು, ಹವಾಮಾನ ಮುನ್ಸೂಚನೆಯ ಪ್ರಕಾರ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಕಳೆದ ವರ್ಷ ರಾಜ್ಯದಲ್ಲಿ ಮಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಇದೀಗ ಹವಾಮಾನ ಸಂಸ್ಥೆ ರೈತರಿಗೆ ಹೊಸ ಸಿಹಿಸುದ್ದಿ ನೀಡಿದೆ.ರಾಜಧಾನಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೈತರ ಮೊಗದಲ್ಲಿ ಹೊಸ ಬೆಳವಣಿಗೆ ನಡೆದಿದೆ.

Forecast of heavy rain in the state!
Forecast of heavy rain in the state!

ರೈತರಿಗೆ ಬೆಳೆ ಬೆಳೆಯುವ ಮುಖ್ಯ ಆಧಾರವೆಂದರೆ ಅಥವಾ ಮಳೆ ಅಥವಾ ನೀರು, ಕಳೆದ ವರ್ಷ ಮಳೆ ಕೊರತೆಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು.

ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಬೇಗೆಗೆ ಜನರು ಬೇಸತ್ತು ಹೋಗಿದ್ದಾರೆ. ಮತ್ತೊಂದೆಡೆ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಆಗಾಗ ಮಳೆರಾಯ ತಂಪೆರೆದು ಜನರ ಮುಖದಲ್ಲಿ ಸಂತಸ ಮೂಡುವಂತೆ ಮಾಡುತ್ತಿದ್ದಾರೆ. ಹಾಗೆಯೇ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ಹಾಗಾದರೆ ಎಲ್ಲೆ ಲ್ಲಿ ಮಳೆ ಸುರಿಯಲಿದೆ ಎಂದು ಮಾಹಿತಿಯನ್ನು ಇಲ್ಲಿ ತಿಳಿಯಿರಿ.ಕರಾವಳಿ ಹಾಗೂ ದಕ್ಷಿಣ ಕನ್ನಡ ಒಳನಾಡಿನ ಕೆಲವೆಡೆ ಇಂದಿನಿಂದ ನಾಲ್ಕು ದಿನಗಳ ಕಾಲ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಹಾಗೂ ಮೈಸೂರಿನಲ್ಲಿ ಇಂದು (ಮಾರ್ಚ್‌ 22) ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿಲ್ಲಿ ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಗ್ರಾಮಾರಂತರ, ಮೈಸೂರು, ಮಂಡ್ಯದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ತುಸು ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಇನ್ನು ಗುರುವಾರ (ಮಾರ್ಚ್‌ 21) ಕೊಪ್ಪಳದಲ್ಲಿ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್‌ ಮತ್ತು ಬೀದರ್‌ನಲ್ಲಿ ಕನಿಷ್ಠ ತಾಪಮಾನ 19.4 ಡಿಗ್ರಿ ಸೆಲ್ಸಿಯಸ್‌ ದಾಖಲು ಆಗಿದೆ ಎನ್ನುವ ಮಾಹಿತಿ ನೀಡಿದೆ.ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಈ ಮೇಲಿನ ಜಿಲ್ಲೆಳಲ್ಲಿ ಮಳೆಯಾದರೆ ಇಲ್ಲಿನ ರೈತರು, ಜನರ ಮುಖದಲ್ಲಿ ಮಂದಹಾಸ ಮುಡುವುದಂತೂ ಗ್ಯಾರಂಟಿ. ಈಗಾಗಲೇ ಚಿಕ್ಕಮಗಳೂರು, ಕೊಡಗು, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಮಳೆರಾಯ ಕರುಣೆ ತೋರಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆಯುತ್ತಾ ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಬೆಂದಿರುವ ಜಿಲ್ಲೆಗಳಿಗೂ ತಂಪೆರೆಯಲಿದ್ದಾನಾ ಎಂದು ಕಾದುನೋಡಬೇಕದೆ.ಮಾರ್ಚ್‌ ಅಂತ್ಯದ ವೇಳೆದು ರಾಜ್ಯದ ಬಹುತೇಕ ಭಾಗಗಲ್ಲಿ ಮಳೆ ಶುರುವಾಗಲಿದೆ ಎನ್ನುವ ಮಾಹಿತಿ ಇದ್ದು, ಈ ಪ್ರಕಾರ ಮಳೆರಾಯ ಕರುಣೆ ತೋರಿ ಭೂಮಿ ತಂಪೆರೆದರೆ ಬಿಸಿಲಿನ ಬೇಗೆಗೆ ಬೆಂದು ಹೋದ ಜೀವ ಮತ್ತೆ ಜನರಿಗೆ ಬಂದಾಂತಾಗುತ್ತದೆ. ಒಟ್ಟಿನಲ್ಲಿ ವರುಣ ಕೃಪೆ ತೋರಿದರೆ ಸಾಕು ಅಂತಿದ್ದಾರೆ ಜಮ್ಮ ಜನ.ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಮೋಡ ಕವಿದ ವಾತಾರವರಣ ನಿರ್ಮಾಣವಾಗುತ್ತಿದೆ. ಆದರೆನ ನಗರದ ಬಹುತೇಕ ಭಾಗಗಳಲ್ಲಿ ಬೆಳಗ್ಗೆಯಿಂದ ಸಂಜೆ 4 ಗಂಟೆಯಾದರೂ ಬಿಸಿಲಿನ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ, ಇದರಿಂದ ನಗರದ ಜನ ಕಂಗೆಟ್ಟು ಹೋಗಿದ್ದಾರೆ.

Leave a Reply

Your email address will not be published. Required fields are marked *