ರಾಜ್ಯದ ಜನತೆಗೆ ಮತ್ತೊಂದು ಗುಡ್‌ ನ್ಯೂಸ್‌…! ನಿಮ್ಮ ಮನೆ ಬಾಗಿಲಿಗೆ ಔಷಧ ವಿತರಣೆ

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಸರ್ಕಾರದ ಮತ್ತೊಂದು ಯೋಜನೆ ಬಗ್ಗೆ ತಿಳಿಸಿಕೊಡಿದ್ದೇವೆ ಏನೆಂದರೆ ಸರ್ಕಾರವು ರಾಜ್ಯದ ಜನತೆಗೆ ಜನತೆಯ ಹಿತಗೋಸ್ಕರ ಆರೋಗ್ಯ ಸೇವೆಯನ್ನು ಸ್ಟಾರ್ಟ್ ಮಾಡಿದೆ ಅಂದರೆ ನಿಮ್ಮ ಮನೆ ಬಾಗಿಲಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಹೊರ ಹಾಕಿದೆ ಬನ್ನಿ ಈ ಯೋಜನೆ ಬಗ್ಗೆ ನಮಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀಡಲಿದ್ದೇವೆ.

Home Health Scheme, Home Health Enforcement
Home Health Scheme, Home Health Enforcement

ಸರ್ಕಾರವು ರಾಜ್ಯದ ಜನರಿಗೆ ಮತ್ತೊಂದು ಹೊಸ ಸುದ್ದಿಯನ್ನು ನೀಡಿದ್ದು, ನಿಮ್ಮ ಮನೆ ಬಾಗಿಲಿಗೆ ಆರೋಗ್ಯ ಸೇವೆ ಮತ್ತು ಔಷಧಿಗಳನ್ನು ಪೂರೈಸಲು ಮುಂದಾಗಿದೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

ಈ ವಿಷಯದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದು, ರಾಜ್ಯದಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ, ಔಷಧ ಪೂರೈಸಲು ನಮ್ಮ ಸರ್ಕಾರ ಮುಂದಾಗಿದೆ ಎಂದಿದ್ದಾರೆ. ರಾಜ್ಯದ ಜನತೆಗೆ ಗುಣಮಟ್ಟದ ಚಿಕಿತ್ಸೆ, ಆರೋಗ್ಯ ಜಾಗೃತಿ ಮೂಡಿಸುವ ಜೊತೆ ಪ್ರಾರಂಭದಲ್ಲಿಯೇ ಜನರ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ರೂಪಿಸುತ್ತಿದೆ.

ರಾಜ್ಯದ 8 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಯೋಜನೆಯಡಿ ಬೆಳಗಾವಿ, ಗದಗ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಆರೋಗ್ಯ ಸಿಬ್ಬಂದಿಗಳು ಪ್ರತಿ ಮನೆ ಮನೆಗೆ ತೆರಳಿ ಪ್ರಾಥಮಿಕ ಸ್ಕ್ರೀನಿಂಗ್‌ ನಡೆಸಲಿದ್ದಾರೆ. ಮಧುಮೇಹ, ಕ್ಯಾನ್ಸರ್‌ ಸೇರಿದಂತೆ ವಿವಿಧ ಬಗೆಯ ರೋಗಗಳ ಸ್ಕ್ರೀನಿಂಗ್‌ ನಡೆಸಿ ಉತ್ತಮ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮನೆಗಳಿಗೆ ಸ್ಟಿಕರ್

ಯೋಜನೆಯಡಿ ಮನೆಗಳಿಗೆ ಭೇಟಿ ನೀಡುವ ತಪಾಸಣಾ ತಂಡಗಳು ಭೇಟಿ ದೃಢಪಡಿಸಲು ಮನೆಗಳಿಗೆ ಸ್ಟಿಕರ್‌ಗಳನ್ನು ಅಂಟಿಸಲಿವೆ. ಈಗಾಗಲೇ ಮಾದರಿ ಸ್ಟಿಕರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಸ್ಟಿಕರ್‌ನಲ್ಲಿ ಜಾಗೃತಿ ಸಂದೇಶ ಯೋಜನೆಯ ಬಗ್ಗೆ ವಿವರ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಭಾವಚಿತ್ರ ಇರಲಿವೆ.

ಯಾವೆಲ್ಲ ಜಿಲ್ಲೆಗಳಲ್ಲಿ ಜಾರಿ?

ರಾಮನಗರ ತುಮಕೂರು ಬೆಳಗಾವಿ ಗದಗ ಬಳ್ಳಾರಿ ಯಾದಗಿರಿ ದಕ್ಷಿಣ ಕನ್ನಡ ಮೈಸೂರು ಸರ್ಕಾರ ನಿಗದಿಪಡಿಸಿದ ಮಾತ್ರೆ ಅಧಿಕ ರಕ್ತದೊತ್ತಡಕ್ಕೆ: ಎಮ್ಲೋಡಿಪೈನ್ 5 ಎಂಜಿ ಟೆಲ್ಮಿಸಾರ್ಟನ್ 40 ಎಂಜಿ ಕ್ಲೋರ್ತಲಿಡೋನ್ 12.5 ಎಂಜಿ ಮಧುಮೇಹಕ್ಕೆ: ಮೆಟ್‌ಫಾರ್ಮಿನ್ ಎಸ್‌ಆರ್ 500 ಎಂಜಿ ಮೆಟ್‌ಫಾರ್ಮಿನ್ ಎಸ್‌ಆರ್ 100 ಎಂಜಿ ಗ್ಲಿಮಿಪ್ರೈಡ್ 1 ಎಂಜಿ

Leave a Reply

Your email address will not be published. Required fields are marked *