ಐಪಿಎಲ್ 2024ರ ಮೊದಲ ಹಂತದ ವೇಳಾಪಟ್ಟಿ, ಇಲ್ಲಿದೆ RCB ತಂಡದ ಸಂಪೂರ್ಣ ಶೆಡ್ಯೂಲ್​

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಈ ಮೆಗಾ ಚುಟುಕು ಸಮರದ ಮೊದಲ ಹಂತ ಮಾರ್ಚ್ 22 ರಿಂದ ಆರಂಭವಾಗಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ipl 2024 schedule in kannada
ipl 2024 schedule in kannada

ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಸಿಎಸ್ ಕೆ ನಾಯಕತ್ವ ಮಹೇಂದ್ರ ಸಿಂಗ್ ಧೋನಿ ಕೈಯಲ್ಲಿದೆ. ದೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, IPL 2024ರ ವೇಳಾಪಟ್ಟಿಯನ್ನು ಮೊದಲ 17 ದಿನಗಳವರೆಗೆ ಮಾತ್ರ ಪ್ರಕಟಿಸಲಾಗಿದೆ, ಇದರಲ್ಲಿ ಮೊದಲ ಹಂತದ ಅಡಿಯಲ್ಲಿ 21 ಪಂದ್ಯಗಳನ್ನು ಆಡಲಾಗುತ್ತದೆ. ಈಗಾಗಲೇ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಲ್ಲದೇ ಮಾರ್ಚ್​ 19ರಿಂದ ಚುನಾವಣೆ ಆರಂಭವಾಗುವ ಹಿನ್ನಲೆ ಐಪಿಎಲ್​ 2024ರ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೇನು ಕೆಲದಿನಗಳಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಇದೀಗ ಪ್ರಸ್ಥುತ ಬಿಡುಗಡೆ ಆಗಿರುವ ವೇಳಾಪಟ್ಟಿಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

ಐಪಿಎಲ್​ 2024ರ ವೇಳಾಪಟ್ಟಿ:

MtachDateTimeVenue
CSK vs RCBಮಾರ್ಚ್ 227:30 PMಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
PBKS vs DCಮಾರ್ಚ್ 233:30 PMಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪಂಜಾಬ್
KKR vs SRHಮಾರ್ಚ್ 237:30 PMಈಡನ್ ಗಾರ್ಡನ್ಸ್, ಕೋಲ್ಕತ್ತಾ
RR vs LSGಮಾರ್ಚ್ 243:30 PMಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ
GT vs MIಮಾರ್ಚ್ 247:30 PMನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
RCB vs PBKSಮಾರ್ಚ್ 257:30 PMಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
CSK vs GTಮಾರ್ಚ್ 267:30 PMಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
SRH vs MIಮಾರ್ಚ್ 277:30 PMರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
RR vs DCಮಾರ್ಚ್ 287:30 PMಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ
RCB vs KKRಮಾರ್ಚ್ 297:30 PMಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
LSG vs PBKSಮಾರ್ಚ್ 307:30 PMಏಕನಾ ಸ್ಪೋರ್ಟ್ಸ್ ಸಿಟಿ, ಲಕ್ನೋ
GT vs SRHಮಾರ್ಚ್ 313:30 PMನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
DC vs CSKಮಾರ್ಚ್ 317:30 PMಎಸಿಎ ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣಂ
MI vs RRಏಪ್ರಿಲ್ 13:30 PMವಾಂಖೆಡೆ ಸ್ಟೇಡಿಯಂ, ಮುಂಬೈ
RCB vs LSGಏಪ್ರಿಲ್ 27:30 PMಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
DC vs KKRಏಪ್ರಿಲ್ 37:30 PMಎಸಿಎ ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣಂ
GT vs PBKSಏಪ್ರಿಲ್ 47:30 PMನರೇಂದ್ರ ಮೋದಿ ಸ್ಟೇಡಿಯಂ, ಮುಂಬೈ
SRH vs CSKಏಪ್ರಿಲ್ 57:30 PMರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
RR vs RCBಏಪ್ರಿಲ್ 67:30 PMಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ
MI vs DCಏಪ್ರಿಲ್ 73:30 PMವಾಂಖೆಡೆ ಸ್ಟೇಡಿಯಂ, ಮುಂಬೈ
LSG vs GTಏಪ್ರಿಲ್ 77:30 PMಏಕನಾ ಸ್ಪೋರ್ಟ್ಸ್ ಸಿಟಿ, ಲಕ್ನೋ

ಹರಾಜಿನಲ್ಲಿ 72 ಆಟಗಾರರು ಮಾರಾಟ:

ಈ ಹಿಂದೆ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ 2024ರ ಹರಾಜಿನಲ್ಲಿ ಒಟ್ಟು 72 ಆಟಗಾರರು ಮಾರಾಟವಾಗಿದ್ದರು. ಇವರಲ್ಲಿ 30 ವಿದೇಶಿ ಆಟಗಾರರು ಸೇರಿದ್ದಾರೆ. ಒಟ್ಟು 10 ಫ್ರಾಂಚೈಸಿಗಳು 230.45 ಕೋಟಿ ರೂ. ಖರ್ಚು ಮಾಡಿದೆ. ಈ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಅತ್ಯಂತ ದುಬಾರಿ ಬೆಲೆಗೆ ಖರೀದಿಸಿತು. KKR 24.75 ಕೋಟಿಗೆ ಸ್ಟಾರ್ಕ್ ಅನ್ನು ಸ್ವಾಧೀನಪಡಿಸಿಕೊಂಡಿತು, ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. ಆದರೆ ಆಸ್ಟ್ರೇಲಿಯಾದ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 20.50 ಕೋಟಿ ರೂ.ಗೆ ಖರೀದಿಸಿದರೆ, ನ್ಯೂಜಿಲೆಂಡ್ ನ ಡೇರಿಲ್ ಮಿಚೆಲ್ ಅವರನ್ನು ಚೆನ್ನೈ 14 ಕೋಟಿ ರೂ.ಗೆ ಖರೀದಿಸಿತು.

Leave a Reply

Your email address will not be published. Required fields are marked *