ಮಕ್ಕಳ ಸಮವಸ್ತ್ರದಲ್ಲಿ ಕೆಲವು ಬದಲಾವಣೆ. 6, 7ನೇ ಕ್ಲಾಸ್‌ ವಿದ್ಯಾರ್ಥಿನಿಯರಿಗೂ ಚೂಡಿದಾರ್!

ನಮಸ್ಕಾರ ಸ್ನೇಹಿತರೆ ಲೇಖನದಲ್ಲಿ ನಾವು ನಿಮಗೆ ಒಂದು ಮಹತ್ವದ ಮಾಹಿತಿ ನೀಡಲಿದ್ದೇವೆ ಏನೆಂದರೆ, ಇದೀಗ ಜೂನ್ ಒಂದರಿಂದ ಎಲ್ಲಾ ಸ್ಕೂಲ್ ಗಳು ಶಾಟಗಳಿದ್ದು ಮಕ್ಕಳಿಗೆ ಯುನಿಫಾರ್ಮ್ ನಲ್ಲಿ ಬದಲಾವಣೆಯನ್ನು ಸರ್ಕಾರ ನೀಡಲಾಗಿದೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

Some change in children's uniform
Some change in children’s uniform

ಕರ್ನಾಟಕದಾದ್ಯಂತ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಈಗಾಗಲೇ ಆರಂಭವಾಗಿವೆ. ಸರ್ಕಾರಿ, ಅನುದಾನಿತ ಶಾಲೆಗಳು 29 ರಿಂದ ಪುನಾರಂಭಗೊಳ್ಳುತ್ತಿವೆ. ಈಗಾಗಲೇ ಜಿಲ್ಲೆಗಳಿಗೆ ಶೇಕಡ.70 ರಷ್ಟು ಪಠ್ಯಪುಸ್ತಕ ರವಾನೆ ಮಾಡಿರುವ ಶಿಕ್ಷಣ ಇಲಾಖೆ, ಹಲವು ಚಟುವಟಿಕೆಗಳನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸುವಂತೆ ಶಾಲೆಗಳಿಗೆ ಸೂಚನೆ ನೀಡಿದೆ. ಅವುಗಳಲ್ಲಿ ಶಾಲೆಗಳಲ್ಲಿ ಮೊದಲನೇ ದಿನದಿಂದಲೇ ಪಠ್ಯಪುಸ್ತಕಗಳನ್ನು ಮತ್ತು ಸಮವಸ್ತ್ರಗಳನ್ನು ನೀಡಬೇಕೆಂಬ ಸೂಚನೆಯನ್ನು ನೀಡಿದೆ. ಸೋಮವಾರದತನಕ ಶೇ.70 ಪಠ್ಯಪುಸ್ತಕಗಳು ಜಿಲ್ಲಾ ಕೇಂದ್ರಗಳಿಗೆ ತಲುಪಿಸಲಾಗಿದ್ದು, ಇನ್ನುಳಿದ ಪಠ್ಯಪುಸ್ತಕಗಳನ್ನು ಹಂತ ಹಂತವಾಗಿ ತಲುಪಿಸುವ ಕಾರ್ಯ ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲೆಗಳನ್ನು ತೆರೆದ ಮೊದಲ ಎರಡು ದಿನಗಳ ಒಳಗಾಗಿ ಅಗತ್ಯ ಸ್ವಚ್ಛತಾ ಕಾರ್ಯ ಮುಗಿಸಬೇಕು. ಮೇ 31 ರಂದು ಮಕ್ಕಳಿಗೆ ಸಿಹಿ ನೀಡಿ ‘ಶಾಲಾ ಪ್ರಾರಂಭೋತ್ಸವ’ ನಡೆಸುವಂತೆ ತಿಳಿಸಿದೆ. ತರಗತಿ / ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಆಹಾರ ಧಾನ್ಯಗಳ ಸ್ವಚ್ಛತೆ ಮತ್ತು ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಿದ್ದಾರೆ.

ಮೇ 29 ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವುದು, ಶಾಲಾಭಿವೃದ್ಧಿ ಯೋಜನೆ, ಶಾಲಾ, ತರಗತಿ, ಶಿಕ್ಷಕರ ವೇಳಾಪಟ್ಟಿ, ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಪ್ರಭಾತ್ ಪೇರಿ, ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು ಎಂದು ಸೂಚಿಸಿದೆ.

ವಿದ್ಯಾರ್ಥಿಗಳಿಗೆ ಸೇತುಬಂಧ

ಜೂನ್ 01 ರಿಂದ 30 ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಸಮವಸ್ತ್ರದಲ್ಲಿ ಕೆಲವು ಬದಲಾವಣೆ

ಸಮವಸ್ತ್ರದಲ್ಲಿ ಕೆಲವು ಬದಲಾವಣೆಗಳನ್ನು ಈ ವರ್ಷ ಶಿಕ್ಷಣ ಇಲಾಖೆ ಮಾಡಿದೆ. 8, 9 ಮತ್ತು 10ನೇ ಕ್ಲಾಸ್‌ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದ ಚೂಡಿದಾರ್ ಸಮವಸ್ತ್ರವನ್ನು ಈ ವರ್ಷದಿಂದ 6 ಮತ್ತು 7 ನೇ ಕ್ಲಾಸ್ ವಿದ್ಯಾರ್ಥಿನಿಯರಿಗೂ ನೀಡಲು ಮುಂದಾಗಿದೆ ಶಿಕ್ಷಣ ಇಲಾಖೆ. ಖುಷಿ ವಿಚಾರವಾಗಿ ಶಾಲಾರಂಭದಲ್ಲಿಯೇ 2 ಜೊತೆ ಸಮವಸ್ತ್ರವನ್ನು 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸಜ್ಜಾಗಿದೆ ಇಲಾಖೆ. ಕಳೆದ ವರ್ಷ ಒಂದೇ ಜೊತೆ ಸಮವಸ್ತ್ರ ವಿತರಣೆ ಮಾಡಿತ್ತು. ಆದರೆ, ಈ ಬಾರಿ ಆರಂಭದಲ್ಲಿಯೇ ಎರಡೂ ಜೊತೆಯನ್ನೂ ವಿತರಣೆ ಮಾಡಿದೆ. ತಿಳಿ ನೀಲಿ ಬಣ್ಣದ ಟಾಪ್‌ ಮತ್ತು ಕಡು ನೀಲಿ ಬಣ್ಣದ ದುಪ್ಪಟವನ್ನು ವಿತರಣೆ ಮಾಡಲಾಗಿದೆ. ಉಳಿದಂತೆ 1 ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ ಮತ್ತು ಅಂಗಿ, 6ನೇ ತರಗತಿ ಮೇಲ್ಪಟ್ಟವರಿಗೆ ಪ್ಯಾಂಟ್ ಸಮವಸ್ತ್ರ ನೀಡಲಾಗಿದೆ.

Leave a Reply

Your email address will not be published. Required fields are marked *